ಚಿತ್ರ: ಸ್ಕೂಲ್ ಮಾಸ್ಟರ್
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಟಿ.ಜಿ.ಲಿಂಗಪ್ಪ
ಗಾಯನ: ರಾಜಲಕ್ಷ್ಮಿ, ಕೋಮಲ, ರಾಣಿ

ಬನ್ನಿರೈ ಬನ್ನಿರೈ ಬನ್ನಿರೈ
ಗುರುಸೇವೆಯೇ ನಮ್ಮ ಸರ್ವೋದಯ ||೨||
ಗುರುಮನೆಯೇ ನಮ್ಮೂರ ದೇವಾಲಯ ||೨||
ಬನ್ನಿರೈ ಬನ್ನಿರೈ ಬನ್ನಿರೈ

ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ
ಮನೆಗೊಂದು ತೊಲೆ ಹೆಂಚು ತನ್ನಿರೆಲ್ಲಾ
ಗುರುಮನೆಯ ಕಟ್ಟುವೆವು ಮಕ್ಕಳೆಲ್ಲಾ

ಬನ್ನಿರೈ ಬನ್ನಿರೈ ಬನ್ನಿರೈ

ಜಾತಿ ಭೇದದ ವ್ಯಾಧಿ ಊರಿನಿಂದ ತೊಲಗಿಸಿ ||೨||
ನೀತಿಯ ಪ್ರೀತಿಯ ಜ್ಯೋತಿಯನ್ನು ಬೆಳಗುವಾ ||೨||
ನುಡಿದಂತೆ ನಡೆಯುವ ಗಂಡುತನ ಕಲಿಸುವಾ ||೨||
ನಾಡ ಕಟ್ಟೊ ಶಕ್ತಿಯಾ ತಾನೊಲಿದು ನೀಡುವ
ಬನ್ನಿರೈ ಬನ್ನಿರೈ ಬನ್ನಿರೈ

ಶಾಲೆಯೊಂದೆ ತನ್ನ ಬಾಳ್ವೆ ಭಾಗ್ಯವೆನ್ನುವಾ ||೨||
ಬಾಲರೆಲ್ಲ ತನ್ನ ಮನೆಯ ಮಕ್ಕಳೆನ್ನುವಾ ||೨||
ತಾಳ್ಮೆಯಿಂದ ನಮ್ಮ ಮತಿಗೆ ಬೆಳಕ ತೋರುವಾ ||೨||
ಗುರುಬ್ರಹ್ಮ ಗುರುವಿಷ್ಣು ಗುರುವೇ ಶಿವಾ ||೨||

ಬನ್ನಿರೈ ಬನ್ನಿರೈ ಬನ್ನಿರೈ

ಗುರುಸೇವೆಯೇ ನಮ್ಮ ಸರ್ವೋದಯ ||೨||
ಗುರುಮನೆಯೇ ನಮ್ಮೂರ ದೇವಾಲಯ ||೨||
ಬನ್ನಿರೈ ಬನ್ನಿರೈ ಬನ್ನಿರೈ

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಸ್ಕೂಲ್ ಮಾಸ್ಟರ್ ಚಿತ್ರ
ವರ್ಗ: ಕಣಗಾಲ್ ಪ್ರಭಾಕರ ಶಾಸ್ತ್ರಿ ಸಾಹಿತ್ಯ
ವರ್ಗ: ರಾಜಲಕ್ಷ್ಮಿ ಗಾಯನ